ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ಈ ಒಂದು ಲೇಖನದಲ್ಲಿ ನಿಮಗೆಲ್ಲರಿಗೂ ರಿಲಯನ್ಸ್ ಫೌಂಡೇಶನ್ ಸ್ಕಾಲರ್ಶಿಪ್ ಬಗ್ಗೆ ತಿಳಿಸಲಿದ್ದೇವೆ. ಈ ಒಂದು ವಿದ್ಯಾರ್ಥಿವೇತನವನ್ನು ಭಾರತದಲ್ಲಿ ಬೇರೆ ಬೇರೆ ಕೋರ್ಸ್ ಗಳಲ್ಲಿ ಪದವಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗಾಗಿ ಹಾಗೂ ಅವರ ವಿದ್ಯಾಭ್ಯಾಸವನ್ನು ಬೆಂಬಲಿಸುವ ಸಲುವಾಗಿ ರಿಲಯನ್ಸ್ ಜಿಯೋ ಡಿಜಿಟಲ್ ಮುಖ್ಯಸ್ಥರಾದ ಶ್ರೀ ಮುಕೇಶ್ ಅಂಬಾನಿಯವರು ಈ ಒಂದು ವಿದ್ಯಾರ್ಥಿವೇತನವನ್ನು ಪ್ರಾರಂಭಗೊಳಿಸಿದ್ದಾರೆ. ಈ ಒಂದು ವಿದ್ಯಾರ್ಥಿವೇತನವನ್ನು ಬೇರೆ ಬೇರೆ ಕೋರ್ಸ್ ಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಮುಗಿಯುವವರೆಗೆ ಸುಮಾರು ₹2 ಲಕ್ಷ ರೂಪಾಯಿಯವರೆಗೆ ವಿದ್ಯಾರ್ಥಿವೇತನವನ್ನು ಸ್ವೀಕರಿಸಬಹುದು. ಈ ಒಂದು ಲೇಖನದಲ್ಲಿ ಈ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಪೂರ್ತಿಯಾಗಿ ಓದಿರಿ.
Reliance Foundation Undergraduate Scholarship 2024
ಸಂಸ್ಥೆಯ ಹೆಸರು | ರಿಲಯನ್ಸ್ ಫೌಂಡೇಶನ್ |
ಸ್ಕಾಲರ್ಶಿಪ್ ಹೆಸರು | ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ಸ್ಕಾಲರ್ಶಿಪ್ 2024 |
ಅರ್ಹರು | ಪದವಿ ಓದುತ್ತಿರುವ ವಿದ್ಯಾರ್ಥಿಗಳು |
ವಿದ್ಯಾರ್ಥಿವೇತನದ ಮೊತ್ತ | 2 ಲಕ್ಷ ರೂಪಾಯಿವರೆಗೆ |
ಕೊನೆ ದಿನಾಂಕ | 15-ಅಕ್ಟೋಬರ್-2024 |
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಮೊದಲನೆಯದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತದಲ್ಲಿ ನಿವಾಸಿಯಾಗಿರಬೇಕು.
- ಎರಡನೇದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2nd ಪಿಯುಸಿಯಲ್ಲಿ ಶೇಕಡ 60% ರಷ್ಟು ಅಂಕವನ್ನು ಗಳಿಸಬೇಕು. ಹಾಗೂ ಯಾವುದೇ ಮಾನ್ಯತೆ ಇರುವ ಒಂದು ಪದವಿ ಕಾಲೇಜಿನಲ್ಲಿ ಪದವಿ ಕೋರ್ಸ್ಗೆ ದಾಖಲಾಗಿರಬೇಕು.
- ಮೂರನೆಯದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವಾರ್ಷಿಕ ಆದಾಯವು 15 ಲಕ್ಷಕ್ಕಿಂತ ಕಡಿಮೆ ಇರಬೇಕು.
- ನಾಲ್ಕನೇದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಲಯನ್ಸ್ ಫೌಂಡೇಶನ್ ವತಿಯಿಂದ ನಡೆಸಲಾಗುವ ಆಟಿಟ್ಯೂಡ್ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕು.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- SSLC ಅಂಕಪಟ್ಟಿ
- 2nd ಪಿಯುಸಿ ಅಂಕಪಟ್ಟಿ
- ಪ್ರಸ್ತುತವಾಗಿ ಓದುತ್ತಿರುವ ಕಾಲೇಜಿನಿಂದ (ಸ್ಟಡಿ ಸರ್ಟಿಫಿಕೇಟ್)
- ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಒಂದು ರಿಲಯನ್ಸ್ ಫೌಂಡೇಶನ್ನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಎಲ್ಲಾ ಪದವಿ ಓದುತ್ತಿರುವ ವಿದ್ಯಾರ್ಥಿಗಳು 15/ಅಕ್ಟೋಬರ್/2024 ರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸ ತಕ್ಕದ್ದು.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಸಲ್ಲಿಸಲು ಬಯಸುವ ಹಾಗೂ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ನಾವು ಮೇಲೆ ಹೇಳಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಒಟ್ಟಾಗಿಸಿಕೊಂಡು ವಿದ್ಯಾರ್ಥಿಗಳು ರಿಲಾಯನ್ಸ್ ಫೌಂಡೇಶನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮುಖಾಂತರ ಅಥವಾ ನಾವು ಕೆಳಗಡೆ ನೀಡಿರುವ ಅಧಿಕೃತ ಲಿಂಕ್ ನ ಮುಖಾಂತರ ತಮ್ಮ ಒಂದು ಅರ್ಜಿಯನ್ನು ಈ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಧಿಕೃತ ಲಿಂಕನ್ನು ಕೆಳಗಡೆ ನೀಡಲಾಗಿದೆ.
ಅಧಿಕೃತ ಅರ್ಜಿಯ ಲಿಂಕ್ | Apply Now |
ವಿದ್ಯಾರ್ಥಿಗಳಿಗೆ ತಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಏನಾದರೂ ಗೊಂದಲ ಉಂಟಾದಲ್ಲಿ ವಿದ್ಯಾರ್ಥಿಗಳು ತಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹತ್ತಿರದ ಯಾವುದೇ ಸೈಬರ್ ಸೆಂಟರ್ಗೆ ಹೋಗಿ ಅಥವಾ ಕಂಪ್ಯೂಟರ್ ಸೆಂಟರ್ಗೆ ಹೋಗಿ ತಮ್ಮ ಅರ್ಜಿಯನ್ನು ಈ ಒಂದು ವಿದ್ಯಾರ್ಥಿವೇತನಕ್ಕೆ ಸುಲಭವಾಗಿ ಸಲ್ಲಿಸಬಹುದು. ಧನ್ಯವಾದ