Ration Card Update: ಪ್ರತಿ ತಿಂಗಳು ಸರ್ಕಾರದಿಂದ ರೇಷನ್ ಪಡೆಯುವ ಎಲ್ಲರಿಗೂ ಸಹ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್.! ಪೂರ್ತಿ ಬರ ಇಲ್ಲಿದೆ ನೋಡಿ.!

Ration Card Update: ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ರೇಷನ್ ಕಾರ್ಡ್ ಒಂದು ಅತ್ಯುತ್ತಮ ಮತ್ತು ಅತ್ಯಗತ್ಯ ದಾಖಲೆಯಾಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ  ಪ್ರಮುಖವಾಗಿ ಜಾರಿಯಾಗಿರುವ ಪಂಚ ಗ್ಯಾರೆಂಟಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತದೆ.

ಇದೀಗ ನಾವು ಹೇಳಲು ಹೊರಟಿರುವ  ವಿಷಯವೇನೆಂದರೆ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಗ್ಯಾರಂಟಿ ಯೋಜನೆಯ ಬಗ್ಗೆ ಒಂದು ಹೊಸ ಅಪ್ಡೇಟ್  ತಿಳಿಸಲು ಹೊರಟಿದ್ದೇವೆ. ಈ ಲೇಖನವನ್ನು ಕೊನೆಯವರೆಗೂ ಓದಿ ಅದನ್ನು ತಿಳಿದುಕೊಳ್ಳಿ.

Ration Card Update: ಅನ್ನಭಾಗ್ಯ ಯೋಜನೆಗೆ ಸರ್ಕಾರದ ಕಡೆಯಿಂದ ಮತ್ತೊಂದು ಹೊಸ ರೂಲ್ಸ್.!

ಗೆಳೆಯರೇ, ಕೆಲವು ದಿನಗಳ ಹಿಂದೆ ಎಷ್ಟೇ  ಕರ್ನಾಟಕ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣದ ಬದಲು  ಸಂಪೂರ್ಣ ಹತ್ತು (10) ಕೆಜಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಮಾಡಿದೆ ಎಂದು ತಿಳಿದುಬಂದಿತ್ತು. ಆದರೆ ಈ ಅನ್ನಭಾಗ್ಯ ಯೋಜನೆಯ ಬಗ್ಗೆ ಹಲವು ರೀತಿಯ  ಸಮಸ್ಯೆಗಳು ಉಂಟಾಗುವ ಕಾರಣದಿಂದ ಈಗ ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡುವ ಯೋಚನೆಯನ್ನು ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರದ ಮುಂದಿನ ನಿರ್ಧಾರದ ಬಗ್ಗೆ ಸಂಪೂರ್ಣವಾಗಿ ಕೆಳಗಿ ನೀಡಲಾಗಿದೆ ಪೂರ್ತಿಯಾಗಿ ಓದಿ.

ಈಗ ತಿಳಿದು ಬರುತ್ತಿರುವ ವಿಷಯವೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮೊದಲಿನಂತೆ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಹೇಗೆ 5 ಕೆಜಿ ಅಕ್ಕಿಯನ್ನು ನೀಡಿ, ಉಳಿದ 5 ಕೆಜಿಯ ಹಣವನ್ನು ನೀಡುತ್ತಿತ್ತು ಅದೇ ರೀತಿಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಮುಂದುವರಿಸುವ ಯೋಚನೆಯನ್ನು ಮಾಡಿದೆ ಎಂದು ತಿಳಿದು ಬರುತ್ತಿದೆ. ಅಂದರೆ ಮೊದಲಿನಂತೆ 5 ಕೆಜಿ ಅಕ್ಕಿಯನ್ನು ಪ್ರತಿ ಫಲಾನುಭವಿಗಳಿಗೂ ನೀಡಿ, ಇನ್ನುಳಿದ 5 ಕೆಜಿಗೆ ಮೊದಲನಂತೆ  ಹಣವನ್ನು ನೀಡಲು ಯೋಚಿಸಿದೆ.

Ration Card Update: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪಷ್ಟಣೆ.!

ಇದೀಗ ರಾಜ್ಯ ಸರ್ಕಾರವು ಕಳೆದು ಒಂದು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಅನ್ನಭಾಗ್ಯ ಯೋಜನೆಯ ಒಂದು ಕೆಜಿ ಅಕ್ಕಿಗೆ 34 ರೂಗಳಂತೆ, ಪ್ರತಿ ಅನ್ನಭಾಗ್ಯ ಫಾನುಭವಿಗಳಿಗೂ ಸಹ ಒಟ್ಟು 5 ಕೆ.ಜಿ ಅಕ್ಕಿಯ ಹಣವನ್ನು ಎಲ್ಲಾ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲು ಚರ್ಚೆ ನಡೆಸಿದೆ, ಮತ್ತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಒಂದು ವಿಷಯದ ಬಗ್ಗೆ ಸ್ಪಷ್ಟಣೆ ನೀಡಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮೊದಲು ಹೇಗೆ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊರತೆಯಾಗಿತ್ತು ಆಗ ರಾಜ್ಯ ಸರ್ಕಾರವು ಹೇಗೆ ಅಕ್ಕಿ ಬದಲು ಪ್ರತಿ ಕೆಜಿಗೆ ಇಂತಿಷ್ಟಂತೆ ಹಣವನ್ನು ನೀಡುತ್ತಿತ್ತು ಅದೇ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ ಎಂಬ ಮಾಹಿತಿಯು ನಮಗೆ ತಿಳಿದು ಬಂದಿದೆ. ಧನ್ಯವಾದ

ನಾನು Kiran ಕಳೆದ 3 ವರ್ಷಗಳಿಂದ ಕಂಟೆಂಟ್ ರೈಟಿಂಗ್ ಮಾಡುತ್ತಿದ್ದೇನೆ. ಮಾಧ್ಯಮ ಮತ್ತು ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಾನು ಪ್ರತಿಯೊಂದು ಸುದ್ದಿಗಳ ಮೇಲೆ ನಿಗಾ ಇಡುತ್ತೇನೆ. ಈಗ ನಾನು ನನ್ನ ಅನುಭವವನ್ನು kannadanidhi.com ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. Contact Us - help.kannadanidhi@gmail.com

Leave a Comment