Ration Card: ರೇಷನ್ ಕಾರ್ಡ್ ದಾರರಿಗೆ ಭರ್ಜರಿ ಸಿಹಿ ಸುದ್ದಿ.!! BPL ಕಾರ್ಡ್ E-KYC ಮಾಡಲು ಕೊನೆಯ ದಿನಾಂಕ ವಿಸ್ತರಣೆಯಾಗಿದೆ.!!

Ration Card: ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರನ್ನು ಸ್ವಾಗತ. ನಮ್ಮ ದೇಶದಲ್ಲಿ ತುಂಬಾ ಜನ ಬಡವರು ಇದ್ದಾರೆ. ಈ ಬಡ ಜನರು ತಮ್ಮ ಜೀವನವನ್ನು ನಡೆಸಲು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಸಾಕಷ್ಟು ಜನರಿಗೆ ಎರಡು ಹೊತ್ತಿನ ಊಟವೂ ಕೂಡ ಸರಿಯಾಗಿ ಸಿಗುವುದಿಲ್ಲಾ. ಈ ಕಾರಣಕ್ಕಾಗಿ, ಭಾರತದಲ್ಲಿ ಪ್ರತಿ ವರ್ಷವೂ ಸಹ ಅನೇಕ ಬಡ ಜನರು ಹಸಿವಿನಿಂದ ಪ್ರಾಣ ಕಳೆದುಕೊಳ್ಳುತ್ತಾರೆ.

ಅಮ್ಮ ಭಾರತ ದೇಶದ ಈ ಸಮಸ್ಯೆಯನ್ನು ಪರಿಗಣಿಸಿ ಸರ್ಕಾರ ಆರ್ಥಿಕವಾಗಿ ದುರ್ಬಲರಾಗಿರುವ ಬಡ ಜನರಿಗೆ ಪ್ರತಿ ತಿಂಗಳು ಉಚಿತ ಧಾನ್ಯಗಳನ್ನು ನೀಡುತ್ತಿದೆ. ದೇಶದಲ್ಲಿ ಸುಮಾರು 80 ಕೋಟಿ ಅಷ್ಟು ಜನರು ಉಚಿತ ಆಹಾರ ಪಡಿತರವನ್ನು ಪಡೆದಿದ್ದಾರೆ. ನೀವು ಭಾರತ ಸರ್ಕಾರದಿಂದ ನೀಡಲಾಗುತ್ತಿರುವ ಉಚಿತ ಆಹಾರದ ಪ್ರಯೋಜನಗಳನ್ನು ನೀವು ಪಡೆಯುತ್ತಿದ್ದರೆ, ಈ ಸುದ್ದಿಯನ್ನು ನೀವು ಗಮನವಿಟ್ಟು ಈ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.

Ration Card: ಪಡಿತರ ಚೀಟಿಗೆ ಇ- ಕೆವೈಸಿ ಮಾಡಿಸಲು ರಾಜ್ಯ ಸರ್ಕಾರವು ದಿನಾಂಕ ವಿಸ್ತರಿಸಿದೆ:

ಭಾರತ ಸರ್ಕಾರವು ನಿಮ್ಮ ಪಡಿತರ ಕಾರ್ಡ್ (Ration Card) ಗಳಿಗೆ ಇ-ಕೆವೈಸಿ (E-KYC) ಸೆಪ್ಟೆಂಬರ್/30/2024 ರವರೆಗೆ ಕಾಲಾವಕಾಶ ನೀಡಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ನೀವು ಸೆಪ್ಟೆಂಬರ್/30/2024 ರೊಳಗೆ ನಿಮ್ಮ ಪಡಿತರ ಚೀಟಿಗೆ ಇ-ಕೆವೈಸಿ (E-KYC) ಯನ್ನು ಮಾಡಿಕೊಳ್ಳಿ, ಇಲ್ಲದಿದ್ದರೆ ನೀವು ಉಚಿತ ಪಡಿತರವನ್ನು ಪ್ರತಿ ತಿಂಗಳು ಪಡೆಯಲು ಸಾಧ್ಯವಾಗುವುದಿಲ್ಲ.

Ration Card: ರೇಷನ್ ಕಾರ್ಡ್ ಇ- ಕೆವೈಸಿ ಮಾಡಿಸುವುದು ಹೇಗೆ.?

ಮೊದಲು ನೀವು ನಿಮ್ಮ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು, ನೀವು ನಿಮ್ಮ ರೇಷನ್ ಕಾರ್ಡ್ನಲ್ಲಿ ಇರುವ ಎಲ್ಲಾ ಕುಟುಂಬದ ಸದಸ್ಯರ ಜೊತೆಗೆ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ತೆರಳಬೇಕು. ಅಲ್ಲಿಗೆ ಹೋಗುವ ಮುನ್ನ ನೀವು ನಿಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ನ ಪ್ರತಿಯನ್ನು (Xerox) ಅನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿಗೆ ಹೋದ ನಂತರ, ನಿಮ್ಮ ರೇಷನ್ ಕಾರ್ಡ್ನಲ್ಲಿ ಇ-ಕೆವೈಸಿ ಮಾಡಲು ಅಲ್ಲಿರುವ ಪಡಿತರ ವಿತರಕರಿಗೆ ಹೇಳಿದರೆ ಅವರು ನಿಮ್ಮ ರೇಷನ್ ಕಾರ್ಡ್ E-KYC ಮಾಡಿಕೊಡುತ್ತಾರೆ.

ಸ್ವಲ್ಪ ಸಮಯದ ನಂತರ, ಆಹಾರ ವಿತರಕರು POS ಟರ್ಮಿನಲ್ನಲ್ಲಿ ಫಿಂಗರ್ಪ್ರಿಂಟ್ಗಳನ್ನು ತೆಗೆದುಕೊಳ್ಳುವ ಮೂಲಕ ಎಲ್ಲಾ ಕುಟುಂಬ ಸದಸ್ಯರ ಎಲೆಕ್ಟ್ರಾನಿಕ್ KYC ಪರಿಶೀಲನೆಯನ್ನು ನಡೆಸಿ e-kyc ಮಾಡಿಕೊಡುತ್ತಾರೆ. ಇ-ಕೆವೈಸಿ ಮಾಡಿಸಿದ ನಂತರ ನೀವು ತಿಂಗಳ ಪಡಿತರ ಮಡೆಯಲು ಯಾವುದೇ ಸಮಸ್ಯೆಗಳಿಲ್ಲದೆ ಪಡೆಯಬಹುದು.

a

ನಾನು Kiran ಕಳೆದ 3 ವರ್ಷಗಳಿಂದ ಕಂಟೆಂಟ್ ರೈಟಿಂಗ್ ಮಾಡುತ್ತಿದ್ದೇನೆ. ಮಾಧ್ಯಮ ಮತ್ತು ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಾನು ಪ್ರತಿಯೊಂದು ಸುದ್ದಿಗಳ ಮೇಲೆ ನಿಗಾ ಇಡುತ್ತೇನೆ. ಈಗ ನಾನು ನನ್ನ ಅನುಭವವನ್ನು kannadanidhi.com ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. Contact Us - help.kannadanidhi@gmail.com

Leave a Comment