Ration Card: 10 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಚೆಕ್ ಮಾಡಿ.!

Ration Card: ಎಲ್ಲಾ ಕರ್ನಾಟಕ ಜನತೆಗೆ ನಮಸ್ಕಾರ! ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಡತನ ರೇಖೆಗಿಂತ ಹೆಚ್ಚಿರುವ ಎಲ್ಲರನ್ನ ಪತ್ತೆ ಹಚ್ಚುವ ಕಾರ್ಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಕಾರ್ಯಾಚರಣೆ ನಡೆಸಿದೆ.

ಕರ್ನಾಟಕದಲ್ಲಿ 10,97,621 ಬಿಪಿಎಲ್ ಪಡಿತರ ಚೀಟಿಗಳನ್ನು ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದಿರುವುದು ಪತ್ತೆಯಾಗಿದೆ. ಇವರಲ್ಲಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, 10,04,716 ಹೆಚ್ಚು ಮಂದಿ ವೇತನ ಪಡೆಯುತ್ತಿರುವವರು ಮತ್ತು 4,036 ಮಂದಿ ಸರ್ಕಾರಿ ನೌಕರರು ಆಗಿದ್ದಾರೆ.

ನೀವು ಕೆಳಗೆ ನೀಡಲಾದ ರೀತಿಯಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ನೀವು (BPL Ration Card) ಪಡೆಯಲು ಅರ್ಹರಲ್ಲಾ.!

ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದರೆ, ಹಾಗೂ ಯಾರೆಲ್ಲಾ ಆದಾಯ ತೆರಿಗೆ ಪಾವತಿದಾರರಾಗಿರುತ್ತಾರೋ ಅವರು, ಮತ್ತು ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು, ಹಾಗೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಸಹ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿದ್ದಾರೋ ಅಂಥವರ ಮತ್ತು ವಾರ್ಷಿಕವಾಗಿ ಯಾರದೆಲ್ಲಾ ₹1.20 ಲಕ್ಷ ಕಿಂತ ಹೆಚ್ಚು ಆದಾಯವನ್ನೂ, ಹೊಂದಿದಾರೋ ಮತ್ತು 7.5 ಎಕರೆ ಜಮೀನು ಹೊಂದಿರುವವರು ಹಾಗೂ ನಗರ ಪ್ರದೇಶಗಳಲ್ಲಿ, ಸೈಟ್ ಅಥವಾ ಜಾಮೀನು ಪ್ರದೇಶಗಳನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶಗಳಲ್ಲಿ ಸ್ವಂತ ಮನೆಗಳನ್ನು ಹೊಂದಿರುವವರು ಬಿಪಿಎಲ್ ಪಡಿತರ ಚೀಟಿಗೆ (BPL Ration Card) ಗಳನ್ನು ಪಡೆಯಲು ಅರ್ಹರಲ್ಲ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆದಾರರು ಬಿಪಿಎಲ್ ಪಡಿತರ ಚೀಟಿ ಪಡೆಯುವ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಾರೆ. ಅವರನ್ನು ಕಂಡು ಹಿಡಿಯಲಾಗುವುದು ಎಂದು ಸರ್ಕಾರ ಹೇಳಿದೆ.

ಪಡಿತರ ಚೀಟಿಗಳನ್ನು ಅಕ್ರಮವಾಗಿ ಖರೀದಿಸಿದ ದಿನದಿಂದ ಇಲ್ಲಿಯವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳ ದಂಡವನ್ನು ವಿಧಿಸಲಾಗುವುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ಪಡಿತರ ಚೀಟಿಯು ರದ್ದಾದ ಪಟ್ಟಿಯನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.!

ಅಕ್ರಮ ಪಡಿತರ ಚೀಟಿದಾರರ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಪ್ರಕಟಿಸಿದೆ. ಈ ಪಟ್ಟಿಯನ್ನು ಪರಿಶೀಲಿಸಲು, ದಯವಿಟ್ಟು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ರದ್ದಾದ ಪಡಿತರ ಚೀಟಿಗಳ ಸಂಪೂರ್ಣ ಪಟ್ಟಿಯನ್ನು ನೀವು ಅಲ್ಲಿ ವೀಕ್ಷಿಸಬಹುದು.

ನಾನು Kiran ಕಳೆದ 3 ವರ್ಷಗಳಿಂದ ಕಂಟೆಂಟ್ ರೈಟಿಂಗ್ ಮಾಡುತ್ತಿದ್ದೇನೆ. ಮಾಧ್ಯಮ ಮತ್ತು ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಾನು ಪ್ರತಿಯೊಂದು ಸುದ್ದಿಗಳ ಮೇಲೆ ನಿಗಾ ಇಡುತ್ತೇನೆ. ಈಗ ನಾನು ನನ್ನ ಅನುಭವವನ್ನು kannadanidhi.com ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. Contact Us - help.kannadanidhi@gmail.com

Leave a Comment