Ration Card Cancellation News: ನಮಸ್ಕಾರ ಸ್ನೇಹಿತರೆ ಇಂದಿನ ಲೇಖನಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಈ ಒಂದು ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸಲು ಬಯಸುವ ವಿಷಯವೇನೆಂದರೆ ಕರ್ನಾಟಕ ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡನ್ನು ಹೊಂದಿರುವ ಎಲ್ಲರಿಗೂ ಕೂಡ ಒಂದು ಶಾಕಿಂಗ್ ಸುದ್ದಿಯನ್ನು ಕೂಡ ನೀಡಿದೆ. ಈ ಲೇಖನದಲ್ಲಿ ಅದರ ಬಗ್ಗೆ ಪೂರ್ತಿ ಮಾಹಿತಿ ನೀಡಲಾಗಿದೆ ಅದೇನೆಂದು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಸ್ನೇಹಿತರೆ ತಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ವಾರದ ಪ್ರಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಸುಮಾರು 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅನರ್ಹ ಗೊಳಿಸಿದೆ. ರಾಜ್ಯ ಸರ್ಕಾರದ ಈ ಒಂದು ಕ್ರಮದ ಬಗ್ಗೆ ನಮ್ಮ ಕರ್ನಾಟಕದ ಜನತೆ ಆಕ್ರೋಶಗೊಂಡಿದೆ.
22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಎಲ್ಲಾ ಫಲಾನುಭವಿಗಳು ನಿರಾಕರಿಸಿದ್ದಾರೆ. ಆದರೆ ಈಗಾಗಲೇ ಅವರೆಲ್ಲರ ಬಿಪಿಎಲ್ ಕಾರ್ಡುಗಳು ಅನರ್ಹಗೊಂಡಿದೆ. ಹೀಗೆ ರದ್ದಾಗಿರುವ ಬಿಪಿಎಲ್ ಪಡಿತರ ಕಾರ್ಡುಗಳ ಹೊಂದಿರುವ ಕುಟುಂಬದವರು ಮುಂದೆ ಏನು ಮಾಡಬೇಕು ಎಂದು ನಾವು ಈ ಲೇಖನದ ಕೆಳಗೆ ತಿಳಿಸಿದ್ದೇವೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲು ಕಾರಣ?
ನಮ್ಮ ಕರ್ನಾಟಕದ ರಾಜ್ಯ ಸರ್ಕಾರವು ನೀಡಿರುವ ಕಾರಣದ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದಾರೆ ಅಂದರೆ ವೈಟ್ ಬೋರ್ಡ್ ಕಾರ್ ಗಳನ್ನು ಹೊಂದಿದ್ದಾರೆ. ಹಾಗೂ ಬಿಪಿಎಲ್ ಕಾರ್ಡ್ ಹೊಂದಿದ್ದರು ಸಹ ಕುಟುಂಬದವರು ಟ್ಯಾಕ್ಸ್ ಪೇಯರ್ ಆಗಿದ್ದಾರೆ ಮತ್ತು ಜಿಎಸ್ಟಿ ಪ್ರೇಯರ್ ಆಗಿದ್ದಾರೆ. ಅಂತಹವರ ಬಿಪಿಎಲ್ ಕಾರ್ಡ್ಗಳನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ಸರ್ಕಾರದಿಂದ ತಿಳಿಸಲಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದಾದವರು ಏನು ಮಾಡಬೇಕು?
ಈ ಒಂದು 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕೂಡ ರದ್ದಾಗಿದ್ದರೆ ನೀವು ಕೂಡಲೇ ನಿಮ್ಮ ಗ್ರಾಮದ ಅಥವಾ ತಾಲೂಕಿನ ಆಹಾರ ಮತ್ತು ಸರಬರಾಜು ಕಚೇರಿಗೆ ತರಡುವ ಮೂಲಕ ಅಲ್ಲಿ ನೀವು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಿದ್ದೀರಿ ಎಂದು ಅರ್ಜಿಯನ್ನು ನೀಡಬೇಕಾಗುತ್ತದೆ.