PM Vishwakarma Scheme: ಸ್ನೇಹಿತರೆ ಇಂದಿನ ಲೇಖನಕ್ಕೆ ನಿಮಗೆಲ್ಲ ಸ್ವಾಗತ. ನೀವೇನಾದರೂ ಟೈಲರಿಂಗ್ ಮಾಡುತ್ತಿದ್ದರೆ ಅಥವಾ ನೀವೇನಾದರೂ ಟೈಲರಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದರೆ, ನಿಮ್ಮೆಲ್ಲರಿಗೂ ಭರ್ಜರಿ ಗುಡ್ ನ್ಯೂಸ್, ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ ಹೊಲಿಗೆ ಯಂತ್ರವನ್ನು ಖರೀದಿಸಲು ನಿಮಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಹೌದು ಸ್ನೇಹಿತರೆ ನಾವು ಇಲ್ಲಿ ಮಾತನಾಡುತ್ತಿರುವುದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ಈ ಒಂದು ಕೇಂದ್ರ ಸರ್ಕಾರದ ಯೋಜನೆಗೆ ನೀವು ನಿಮ್ಮ ಅಜ್ಜಿಯನ್ನು ಸಲ್ಲಿಸುವ ಮುಖಾಂತರ ಹೊಲಿಗೆ ಯಂತ್ರವನ್ನು ಖರೀದಿಸಲು ನಿಮಗೆ ಕೇಂದ್ರ ಸರ್ಕಾರದಿಂದ ಸುಮಾರು 15000 ದಷ್ಟು ಸಹಾಯಧನವನ್ನು ನೀಡಲಾಗುತ್ತದೆ, ಈ ಯೋಜನೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ.
PM Vishwakarma Scheme: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ!
ನೀವೇನಾದರೂ ಟೈಲರಿಂಗ್ ಮಾಡುತ್ತಿದ್ದಲ್ಲಿ ಅಥವಾ ನಿಮಗೆ ಟೈಲರಿಂಗ್ ನಲ್ಲಿ ಸುಮಾರು ವರ್ಷಗಳಷ್ಟು ಅನುಭವಿದ್ದು ನೀವೇನಾದರೂ ನಿಮ್ಮ ಸ್ವಂತ ಟೈಲರಿಂಗ್ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ ನೀವು ಈ ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನಿಮಗೆ 15000 ಗಳಷ್ಟು ಹಣವನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ. ಹಾಗೂ ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸುಮಾರು 3 ಲಕ್ಷದವರೆಗೆ ಸಾಲವನ್ನು ಸಹ ನೀಡಲಾಗುತ್ತದೆ.
ನೀವೇನಾದರೂ ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿಮ್ಮ ಟೈಲರಿಂಗ್ ವೃತ್ತಿಯ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಿದ್ದೆ ಆದರೆ ನಿಮಗೆ ಒಂದು ವಾರದ ಸಮಯದಷ್ಟು ಟೈಲರಿಂಗ್ ಟ್ರೈನಿಂಗ್ ಗಾಗಿ ಕರೆಯಲಾಗುತ್ತದೆ. ಈ ಒಂದು ಟ್ರೈನಿಂಗ್ ಸಮಯದಲ್ಲಿ ನಿಮಗೆ ದಿನಕ್ಕೆ ಇಷ್ಟೊಂದು ಒಂದು ವಾರದ ಮಟ್ಟಿಗೆ ಹಣವನ್ನು ಸಹ ನೀಡಲಾಗುತ್ತದೆ. ಈ ಒಂದು ಟ್ರೈನಿಂಗ್ ಮುಗಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಸುಮಾರು 15000 ರೂಪಾಯಿಯನ್ನು ಟೈಲರಿಂಗ್ ಸಲಕರಣೆಗಳನ್ನು ಕೊಳ್ಳಲು ಮತ್ತು ನಿಮ್ಮ ಟೈಲರಿಂಗ್ ದೃಷ್ಟಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಈ ಹಣವನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳು ಬೇಕಾಗುತ್ತದೆ :
- ಆಧಾರ್ ಕಾರ್ಡ್
- ನಿಮ್ಮ ವೃತ್ತಿ ಪ್ರಮಾಣ ಪತ್ರ
- ಮೊಬೈಲ್ ನಂಬರ್ ( ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು)
- ಜಾತಿ ಪ್ರಮಾಣ ಪತ್ರ
- ನಿಮ್ಮ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ( ನಿಮ್ಮ ಬ್ಯಾಂಕ್ ಅಕೌಂಟ್ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು)
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವವರು ಇಂತಿಷ್ಟೇ ಆದಾಯವನ್ನು ಹೊಂದಿರಬೇಕು ಎಂದು ಉಲ್ಲೇಖ ಪಡಿಸಲಾಗಿದೆ. ಹಾಗೂ ಆದಾಯ ತೆರಿಗೆಯನ್ನು ಪಾವತಿಸಿದೆ ಇರುವ ಎಲ್ಲರೂ ಸಹ ಈ ಒಂದು ಯೋಜನೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ ಅಡಿ ಸಾಲವನ್ನು ಪಡೆಯಬೇಕು ಎಂದು ಅಂದುಕೊಳ್ಳುವವರು ಸಹ ಈ ಷರತ್ತುಗಳು ಅನ್ವಯಿಸುತ್ತದೆ. ಹೀಗಾಗಿ ಈ ಒಂದು ಯೋಜನೆ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಕೇಂದ್ರ ಸರ್ಕಾರದ ಈ ಒಂದು ಯೋಜನೆಗೆ ನೀವೇನಾದ್ರು ಅರ್ಜಿ ಸಲ್ಲಿಸಲು ಬಯಸಿದರೆ ನೀವು ಮೊದಲು ಮಾಡಬೇಕಾದ ಕೆಲಸವೇ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ ನೀವು ಅಲ್ಲಿ ಸೈನ್ ಇನ್ ಆಗುವ ಮೂಲಕ ನಿಮ್ಮ ಖಾತೆಯನ್ನು ರಚಿಸಿಕೊಳ್ಳಬೇಕು. ನಂತರ ನಿಮ್ಮ ಖಾತೆಗೆ ಲಾಗಿನ್ ಆಗುವ ಮುಖಾಂತರ ಈ ಒಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ : https://pmvishwakarma.gov.in/
ನಿಮಗೇನಾದರೂ ಈ ಒಂದು ಯೋಜನೆಯ ಅಧಿಕೃತ ಜಾಲತಾಣದಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಲು ಕಷ್ಟವಾದಲ್ಲಿ ನೀವು ಮೇಲೆ ನಾವು ತಿಳಿಸಿರುವ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ತೆರಳಿ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ನೀವು ಈ ಒಂದು ಯೋಜನೆಯ ಬಗ್ಗೆ ತಿಳಿಸಿ ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಧನ್ಯವಾದ