Pan Card Apply: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಏಕೆಂದರೆ ಪಾನ್ ಕಾರ್ಡ್ ನಿಂದ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಅದರಲ್ಲಿಯೂ ಹಣಕಾಸಿನ ವಹಿವಾಟುಗಳಲ್ಲಿ ಮುಖ್ಯ ಪಾತ್ರವನ್ನು ಪಾನ್ ಕಾರ್ಡ್ ವಹಿಸುತ್ತದೆ. ಹಾಗೂ ಆಸ್ತಿಗಳ ಖರೀದಿಗಳಲ್ಲಿ ಹಾಗೂ ಜಮೀನುಗಳ ಖರೀದಿಗಳ ವಹಿವಾಟುಗಳಲ್ಲಿಯೂ ಸಹ ಪಾನ್ ಕಾರ್ಡ್ ಪಾನ್ ಕಾರ್ಡ್ ನ ಅಗತ್ಯವು ಹೆಚ್ಚಾಗಿ ಇರುತ್ತದೆ.
ಈ ರೀತಿಯಾಗಿ ಹಲವಾರು ವೈಯಕ್ತಿಕ ಕೆಲಸಗಳಲ್ಲಿ ಹಾಗೂ ಸರ್ಕಾರಿ ಕೆಲಸಗಳಲ್ಲಿಯೂ ಸಹ ಪಾನ್ ಕಾರ್ಡ್ ನ ಅವಶ್ಯಕತೆಯು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಇದ್ದೇ ಇರುತ್ತದೆ ಎಂದು ಹೇಳಬಹುದು. ಹೀಗಾಗಿ ಪ್ರತಿಯೊಬ್ಬ ಪ್ರಜೆಯೂ ಕೂಡ ಪಾನ್ ಕಾರ್ಡ್ ಹೊಂದಿರಬೇಕು. ಹೀಗಾಗಿ ನೀವೇನಾದರೂ ಪಾನ್ ಕಾರ್ಡ್ ಅನ್ನು ಹೊಂದಿಲ್ಲದಿದ್ದರೆ ಸುಲಭವಾಗಿ ಆನ್ಲೈನ್ ಮೂಲಕ ಅನ್ವಯಿಸಿ ನೀವು ನಿಮ್ಮ ಪಾನ್ ಕಾರ್ಡ್ ಪಡೆದುಕೊಳ್ಳಬಹುದು. ಇದರ ಸಂಪೂರ್ಣ ಮಾಹಿತಿಗಳನ್ನು ವಿವರಿಸಲಾಗಿದೆ ಓದಿರಿ.
Pan Card Apply
ಪಾನ್ ಕಾರ್ಡ್ ಸಂಪೂರ್ಣ ವಿವರವಾದ ಹೆಸರು (ಪರಮನೆಂಟ್ ಅಕೌಂಟ್ ನಂಬರ್) ನೀವು ಪಾನ್ ಕಾರ್ಡ್ ಅನ್ನು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಸರ್ಕಾರವು ಅನೇಕ ಕೆಲಸಗಳಿಗೆ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯಗೊಳಿಸಿದೆ ಎಂದು ಹೇಳಬಹುದು. ಉದಾಹರಣೆಗೆ ಹೇಳುವುದಾದರೆ ನೀವು ಬ್ಯಾಂಕ್ ನಲ್ಲಿ ನಿಮ್ಮ ಖಾತೆಯನ್ನು ತೆರೆಯಬೇಕಾದರೆ ಬ್ಯಾಂಕ್ ಸಿಬ್ಬಂದಿ ಮೊದಲು ಕೇಳುವುದು ಪಾನ್ ಕಾರ್ಡ್ ಅನ್ನು ಈ ರೀತಿ ಅನೇಕ ರೀತಿಯ ಕೆಲಸಗಳಿಗೆ ಪಾನ್ ಕಾರ್ಡ್ ಅವಶ್ಯಕತೆ ಇದೆ.
ನೀವು ಪಾನ್ ಕಾರ್ಡನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡರ ಮೂಲಕವೂ ಅಪ್ಲೈ ಮಾಡುವ ಮೂಲಕ ಪಡೆದುಕೊಳ್ಳಬಹುದು. ನೀವು ಪಾನ್ ಕಾರ್ಡ್ ಅನ್ನು ಅಪ್ಲೈ ಮಾಡಲಿಕ್ಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ ನೀವೇನಾದರೂ ನಮ್ಮ ಭಾರತದ ವಿಳಾಸದಲ್ಲಿ ಪಾನ್ ಕಾರ್ಡ್ ಮಾಡಿಸಿದರೆ ₹107 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಮತ್ತು ವಿದೇಶಿ ವಿಳಾಸದಲ್ಲಿ ಏನಾದರೂ ನೀವು ಪಾನ್ ಕಾರ್ಡ್ ಅಪ್ಲೈ ಮಾಡಲು ಬಯಸಿದರೆ ₹1017 ರೂಪಾಯಿಗಳಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ನಿಮ್ಮ ವಿಳಾಸದ ಪುರಾವೆ
- ಗುರುತಿನ ಚೀಟಿ
- ಎರಡು ಭಾವಚಿತ್ರಗಳು
- ಬ್ಯಾಂಕ್ ಅಕೌಂಟ್ ವಿವರಗಳು
- ಅನ್ವಯವಾಗುವ ಅರ್ಜಿ ಶುಲ್ಕ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಮೊದಲು (NSDL) ಎನ್ ಎಸ್ ಡಿ ಎಲ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ನಂತರ ಅಲ್ಲಿ ನಿಮಗೆ ಅನ್ವಯವಾಗುವ ಅಪ್ಲಿಕೇಶನ್ ಪ್ರಕಾರವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
- ಇದಾದ ನಂತರ ಅಲ್ಲಿ ನೀವು ನಿಮ್ಮ ವರ್ಗವನ್ನು ಮತ್ತು ಜನ್ಮ ದಿನಾಂಕವನ್ನು ಹಾಗೂ ನಿಮ್ಮ ಹೆಸರನ್ನು ನಂಬುಲಿಸಬೇಕು ಮತ್ತು ಇನ್ನಿತರ ವಿವರಗಳನ್ನು ಅಲ್ಲಿ ನಮೂದಿಸಬೇಕು.
- ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅಲ್ಲಿ ನಮೂದಿಸಬೇಕು ಮತ್ತು ನಿಮಗೆ ಒಂದು ಓಟಿಪಿ (OTP) ಸ್ವೀಕಾರವಾಗುತ್ತದೆ ಅದನ್ನು ನಮೂದಿಸಬೇಕು.
- ಇದಾದ ನಂತರ ನೀವು ಈಗ ನಿಮ್ಮ ಡಿಜಿಟಲ್ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು ಅದಕ್ಕಾಗಿ ಇನ್ನೊಂದು ಪುಟ್ಟ ತಿಳಿದುಕೊಳ್ಳುತ್ತದೆ ಅಲ್ಲಿ ಪೂರ್ಣಗೊಳಿಸಬಹುದು.
- ಈಗ ನೀವು ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ನೀವು ನಿಮ್ಮ ಶುಲ್ಕವನ್ನು ಪಾವತಿಸಿದ ಮೇಲೆ ಮತ್ತೊಮ್ಮೆ ನಿಮ್ಮ ಆಧಾರ್ ಕಾರ್ಡನ್ನು ನಮೂದಿಸಿ (OTP) ಓಟಿಪಿಯನ್ನು ಪಡೆದುಕೊಂಡು ಪರಿಶೀಲಿಸಬೇಕು.
- ಇದಾದ ನಂತರ ನೀವು ನಿಮ್ಮ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಈಗ ನಿಮ್ಮ ಪಾನ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ 20 ರಿಂದ 30 ದಿನಗಳ ಒಳಗೆ ಪೋಸ್ಟ್ ಮುಖಾಂತರ ಬಂದು ತಲುಪುತ್ತದೆ.