Gruhalakshmi Amount: ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಜುಲೈ ತಿಂಗಳಿನ ₹2,000 ಮತ್ತು ಆಗಸ್ಟ್‌ನ ₹2,000 ಎರಡು ಸೇರಿ ಒಟ್ಟು ₹4,000 ಹಣವನ್ನು ಒಟ್ಟಿಗೆ ಜಮಾ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂಬ ಮಾಹಿತಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಜೂನ್ ತಿಂಗಳ ಬಾಕಿ 2000 ಮೊತ್ತವನ್ನು ಈಗಾಗಲೇ ಜಮಾ ಮಾಡಲಾಗಿದೆ ಮತ್ತು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಡಿಬಿಟಿ (ನೇರ ಬ್ಯಾಂಕ್ ವರ್ಗಾವಣೆ) ಮೂಲಕ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಜುಲೈ ಮತ್ತು ಆಗಸ್ಟ್‌ನ ಉಳಿದ ತಿಂಗಳುಗಳ ಹಣವನ್ನು ಫಲಾನುಭಿಗಳ ಖಾತೆಗಳಿಗೆ ₹4,000 ಜಮಾ ಮಾಡಲಾಗುವುದು ಎಂದು ಸುದ್ಧಿ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಓದಿರಿ.
Gruhalakshmi Amount: ಗೃಹಲಕ್ಷ್ಮಿ ಜುಲೈ ₹2000 ಮತ್ತು ಆಗಸ್ಟ್ ₹2000 ಹಣವು ಜಮಾ:
ಹೌದು ಸ್ನೇಹಿತರೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬಾಳ್ಕರ್ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಪ್ರತಿ ತಿಂಗಳು ಸುಮಾರು 2,400 ಕೋಟಿ ರೂ. ಅವರು ಹೇಳಿದರು ಹಣ ಜಮಾ ಮಾಡುವಲ್ಲಿನ ಎಲ್ಲಾ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲಾಗಿದೆ ಮತ್ತು ಪ್ರತಿಯೊಬ್ಬರ ಖಾತೆಗೆ ಹಣ ಇನ್ನೆರೆಡು ವಾರದೊಳಗೆ ಜಮಾ ಮಾಡಲಾಗುವುದು ಎಂದರು.
ಸಚಿವೆ ಲಕ್ಷ್ಮೀ ಹೆಬಾಳ್ಕರ್ ಮಂಡ್ಯದಲ್ಲಿ ಪ್ರಚಾರದ ಹೇಳಿಕೆ ನೀಡಿ ಮೂರು ದಿನಗಳಾಗಿವೆ, ಮತ್ತು ಎರಡು ವಾರದೊಳಗೆ, ಎಲ್ಲಾ ಜಿಲ್ಲೆಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರ ಎಲ್ಲಾ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಲಾಗುವುಡು ಎಂದು ತಿಳಿಸಿದರು.
ಜೂನ್ ತಿಂಗಳ ಬಾಕಿ ಇದ್ದ 2000 ರೂ. ಗಳನ್ನು ಈಗಾಗಲೇ ವರ್ಗಾಯಿಸಲಾಗಿದೆ ಮತ್ತು ಜುಲೈ ತಿಂಗಳ ಬಾಕಿ ಇರುವ 2000 ರೂ.ಗಳನ್ನು ಮುಂದಿನ ಎರಡು ವಾರಗಳಲ್ಲಿ ಎಲ್ಲಾ ಖಾತೆಗಳಿಗೆ ವರ್ಗಾಯಿಸಲಾಗುವುದು. ಆಗಸ್ಟ್ ತಿಂಗಳ ಕಂತಿನ 2,000 ರೂಪಾಯಿಯನ್ನು ಎಲ್ಲರ ಖಾತೆಗಳಿಗೆ ಪಾವತಿಸಲಾಗುವುದು ಎಂದು ಅವರು ಹೇಳಿದರು. ನಾವು ದಿನಕ್ಕೆ 400 ರಿಂದ 500 ಕರೆಗಳನ್ನು ಸ್ವೀಕರಿಸುತ್ತೇವೆ ಸಚಿವರಾದ ನಾವು ಕೂಡ ಎಲ್ಲ ಕರೆಗಳಿಗೆ ಉತ್ತರಿಸುತ್ತೇವೆ ಎಂದು ಹೇಳಿದರು.