Gruhalakshmi 12th installment: ಇಂದು ಈ ಲೇಖನದಲ್ಲಿ ಪ್ರಸ್ತುತಪಡಿಸಲಾದ ಹೊಸ ಮಾಹಿತಿಯು ಗೃಹಲಕ್ಷ್ಮಿ ಯೋಜನೆಯ ಫನುಭವಿಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಯಾವುದು ಈ ಒಳ್ಳೆಯ ಸುದ್ದಿ? ಗೃಹಲಕ್ಷ್ಮಿ 12ನೇ ಕಂತಿನ 2000 ರೂ. ಬಿಡುಗಡೆ ದಿನಾಂಕ ಯಾವಾಗ? ಈ ಲೇಖನವು ಎಲ್ಲಾ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ, ಆದ್ದರಿಂದ ದಯವಿಟ್ಟು ಕೊನೆಯವರೆಗೂ ಓದಿರಿ.
ಗೃಹಲಕ್ಷ್ಮಿ ಯೋಜನೆಯ 12 ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎಲ್ಲಾ ಮಹಿಳೆಯರು ಕುತೂಹಲದಿಂದ ಕಾಯುತ್ತಿದ್ದಾರೆ, ಆದರೆ ಅವರಿಗೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣವನ್ನು ಇದೇ ದಿನ ಬಿಡುಗಡೆ ಮಾಡುವುದಾಗಿ ಸರಕಾರದಿಂದ ಸುದ್ದಿ ಮೂಲಕ ತಿಳಿದು ಬಂದಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಮೂಲಕ ನಮ್ಮ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಉಚಿತವಾಗಿ ಸಿಗುತ್ತಿದೆ, ಕಾಂಗ್ರೆಸ್ ಸರ್ಕಾರ ಈಗಾಗಲೇ 11ನೇ ಕಂತಿನ ಹಣವನ್ನು ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಮಾಡಿದ್ದು, ಒಟ್ಟು 22 ಸಾವಿರ ರೂ.ಗಳನ್ನು ಮಹಿಳೆಯರು ಪಡೆದಿದ್ದಾರೆ.
Gruhalakshmi 12th installment: ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ₹2000 ಹಣ ಈ ದಿನ ಬಿಡುಗಡೆಯಾಗಲಿದೆ:
ಗೃಹಲಕ್ಷ್ಮಿ ಯೋಜನೆಯ 12 ನೇ ಕಂತಿನ 2000 ಯಾವಾಗ ಬಿಡುಗಡೆಯಾಗುತ್ತದೆ ಎಂದು ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳು ಕಾಯುತ್ತಿರಬಹುದು, ಈಗ 12ನೇ ಕಂತಿನ ಬಗ್ಗೆಯೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಮಾಹಿತಿ ನೀಡಿದ್ದಾರೆ.
ಮಾಹಿತಿ ಪ್ರಕಾರ ಸೆಪ್ಟೆಂಬರ್ 28 ರಂದು ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ₹2,000 ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ 30 ರೊಳಗೆ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಮೊತ್ತವನ್ನು ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುವುದಾಗಿಯೂ ಭರವಸೆ ನೀಡಲಾಗಿದೆ.