Central Government Scheme: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಹೊಸ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಬಯಸುವ ವಿಚಾರವೇನೆಂದರೆ ಕೇಂದ್ರ ಸರ್ಕಾರವು ನಮ್ಮ ದೇಶದ ಎಲ್ಲಾ ಬಡ ಮಹಿಳೆಯರಿಗಾಗಿ ಮತ್ತು ಮಧ್ಯಮ ವರ್ಗದ ಮಹಿಳೆಯರಿಗಾಗಿ ಅವರು ತಮ್ಮ ಜೀವನವನ್ನು ಸ್ವಾವಲಂಬಿಯಾಗಿ ನಡೆಸಲು ಹಾಗು ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹಲವಾರು ಯೋಜನೆಗಳನ್ನು ಈಗಾಗಲೇ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ಅದೇ ರೀತಿ ಇಂದು ನಾವು ಕೂಡ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ 2 ಲಕ್ಷ ಸಾಲ ಪಡೆಯಬಹುದಾದಂತಹ ಸ್ವರ್ಣಿಮಾ ಯೋಜನೆಯ ಬಗ್ಗೆ ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿದ್ದೇವೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಪೂರ್ತಿಯಾಗಿ ಓದಿರಿ.
ಕೇಂದ್ರದ ಸ್ವರ್ಣಿಮಾ ಸಾಲ ಸೌಲಭ್ಯದ ಯೋಜನೆ:
ನಮ್ಮ ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಸಹಾಯಕಾರಿಯಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಲೇ ಇರುತ್ತಾರೆ ಅದರಲ್ಲಿ ಕೆಲವು ಉಚಿತ ಹಣ ನೀಡುವ ಯೋಜನೆಗಳಾದರೆ. ಇನ್ನು ಕೆಲವು ಸಾಲ ಸೌಲಭ್ಯದಂತಹ ಯೋಜನೆಯಾಗಿದೆ. ಇಂತಹ ಯೋಜನೆಗಳಲ್ಲಿ ಒಂದಾದ ಸ್ವರ್ಣಿಮಾ ಯೋಜನೆಯವೂ ಕೂಡ ಒಂದಾಗಿದೆ. ಈ ಒಂದು ಸ್ವರ್ಣಿಮಾ ಯೋಜನೆಯ ಮುಖಾಂತರ ಮಹಿಳೆಯರು 2 ಲಕ್ಷ ರೂಪಾಯಿಗಳಷ್ಟು ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು.
ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸಾಲವನ್ನು ನೀಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಬಡವರ್ಗದ ಹಾಗೂ ಹಿಂದುಳಿದ ಮಹಿಳೆಯರ ತಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಲು ಸುಮಾರು 2,00,000 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು. ಈ ಒಂದು ಸಾಲದ ಬಡ್ಡಿ ಕೇವಲ 5% ರಷ್ಟು ಮಾತ್ರ. ಹಿಂದುಳಿದ ಒಬಿಸಿ ಮಹಿಳೆಯರಿಗೆ ಈ ಒಂದು ಸಾಲದ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸ್ವರ್ಣಿಮಾ ಯೋಜನೆಯ ಪ್ರಯೋಜನಗಳು ಮತ್ತು ಅರ್ಹತೆಗಳು:
- ಈ ಒಂದು ಯೋಜನೆ ಮೂಲಕ ಮಹಿಳೆಯರು ಸ್ವಯಂ ಉದ್ಯೋಗ ಪ್ರಾರಂಭಿಸಲು ₹2 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
- ಈ ಒಂದು ಸಾಲದಲ್ಲಿ ಬಡ್ಡಿದರವು ಕೇವಲ 5% ರಷ್ಟು ಮಾತ್ರ.
- ಈ ಒಂದು ಸಾಲದ ಮೂಲಕ ₹2 ಲಕ್ಷದ ಒಳಗಿನ ಯಾವುದಾದರೂ ವ್ಯಾಪಾರವನ್ನು ಮಾಡಿ ಮಹಿಳೆಯು ತನ್ನ ಆರ್ಥಿಕ ಅಭಿವೃದ್ಧಿಯನ್ನು ಕಾಣಬಹುದು.
ಅರ್ಹತೆಗಳು:
- ಮೊದಲನೇದಾಗಿ ಅರ್ಜಿದಾರರು ಮಹಿಳೆ ಆಗಿರಬೇಕು.
- ಎರಡನೆಯದಾಗಿ ಅರ್ಜಿದಾರ ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
- ಮೂರನೆಯದಾಗಿ ಅರ್ಜಿದಾರ ಮಹಿಳೆಯು ವಾಣಿಜ್ಯ ವ್ಯಾಪಾರಿಯಾಗಿರಬೇಕು.
- ನಾಲ್ಕನೇದಾಗಿ ಅರ್ಜಿ ಸಲ್ಲಿಸುವ ಮಹಿಳೆಯ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಅರ್ಜಿದಾರರ ಫೋಟೋ
- ಮೊಬೈಲ್ ನಂಬರ್
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಸ್ವರ್ಣಿಮಾ ಯೋಜನೆಯ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಅರ್ಜಿದಾರರು ತಮ್ಮ ಹತ್ತಿರದ SCA ಕಚೇರಿಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ತಮ್ಮ ಹತ್ತಿರದ SCA ಕಚೇರಿಯ ಸ್ಥಳವನ್ನು ಪರಿಶೀಲಿಸಲು ನಾವು ಕೆಳಗಡೆ ನೀಡಲಾದ ಅಧಿಕೃತವಾದ ಲಿಂಕನ್ನು ಅನುಸರಿಸಿ ನೀವು ಪರಿಶೀಲಿಸಿಕೊಳ್ಳಬಹುದು. ಈ ಒಂದು ಕಚೇರಿಗೆ ಭೇಟಿ ನೀಡಿದ ಮೇಲೆ ನಿಮಗೆ ಈ ಯೋಜನೆ ಅರ್ಜಿ ನಮೂನೆಯನ್ನು ಒದಗಿಸಲಾಗುತ್ತದೆ. ನಂತರ ನೀವು ಸಾಲ ಪಡೆಯುವ ಉದ್ದೇಶ ಹಾಗೂ ನೀವು ಯಾವ ವ್ಯಾಪಾರ ಮಾಡುತ್ತಿದ್ದೀರಿ ಮತ್ತು ಇತರೆ ಎಲ್ಲ ವಿವರಗಳನ್ನು ಫಾರ್ಮ್ನಲ್ಲಿ ಲಗತಿಸುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಅಧಿಕೃತ ವೆಬ್ ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ