Business Loan Apply Now: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಬಯಸುವ ವಿಷಯವೇನೆಂದರೆ ಮಹಿಳೆಯರಿ ಗೋಸ್ಕರ ಸ್ವಂತ ಉದ್ಯಮ ಆರಂಭಿಸಲು ಸುಮಾರು 2 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ ಹಾಗೂ ಹೀಗೆ ನೀಡಲಾಗುತ್ತಿರುವ ಸಬ್ಸಿಡಿಗೆ ಅರ್ಜಿ ಆರಂಭಿಸಲಾಗಿದೆ. ನೀವು ಕೂಡ ಈ ಒಂದು ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಸಬ್ಸಿಡಿ ಸೌಲಭ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ ತಪ್ಪದೆ ಓದಿರಿ.
Table of Contents
ಸ್ವಂತ ಉದ್ಯಮವನ್ನು ಪ್ರಾರಂಭಿಸಲು 2 ಲಕ್ಷ ಸಬ್ಸಿಡಿ ಸೌಲಭ್ಯ:
ಸ್ನೇಹಿತರೆ ನೀವು ಕೂಡ ನಿಮ್ಮ ಸ್ವಂತ ಉದ್ಯೋಗವನ್ನು ಅಥವಾ ಉದ್ಯಮವನ್ನು ಪ್ರಾರಂಭಿಸಲು ತಿಳಿಸಿದ್ದರೆ ನೀವು ಸರ್ಕಾರದ ಈ ಒಂದು ಸಬ್ಸಿಡಿ ಸೌಲಭ್ಯದ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮೈಕ್ರೋ ಕ್ರೆಡಿಟ್ ಮತ್ತು ಸ್ವಯಂ ಉದ್ಯೋಗ ನೇರ ಸಾಲವನ್ನು ಪಡೆಯುವ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ಸುಮಾರು ₹1 ಲಕ್ಷ ರೂಪಾಯಿಯಿಂದ ಹಿಡಿದು ₹2 ಲಕ್ಷ ರೂಪಾಯಿ ವರೆಗೂ ಸಹ ಸಬ್ಸಿಡಿ ಸಾಲವನ್ನು ಪಡೆದುಕೊಳ್ಳಬಹುದು.
ಈ ಒಂದು ಸಬ್ಸಿಡಿ ಸಾಲವನ್ನು ಪಡೆದುಕೊಳ್ಳಲು ಯಾವೆಲ್ಲಾ ಪ್ರಮುಖ ದಾಖಲೆಗಳು ಬೇಕು ಮತ್ತು ಇನ್ನಿತರ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿದ್ದೇವೆ ಪೂರ್ತಿಯಾಗಿ ಓದಿ.
1. ಸ್ವಯಂ ಉದ್ಯೋಗಕ್ಕೆ ನೇರ ಸಬ್ಸಿಡಿ ಸಾಲ ಸೌಲಭ್ಯ ಯೋಜನೆ:
ಸ್ನೇಹಿತರೆ ಈ ಒಂದು ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸುವ ಮುಖಾಂತರ ಒಟ್ಟು ನಿಮಗೆ ಸಿಗುವ ಸಹಾಯಧನದ ಮೊತ್ತವು ₹50,000 ರೂಪಾಯಿ ಸಿಗುತ್ತದೆ. ನೀವೇ ನಂತರ ಯಾವುದಾದರೂ ಘಟಕವನ್ನು ನಿರ್ಮಿಸಲು ಬಯಸಿದ್ದಲ್ಲಿ ಆ ಘಟಕವನ್ನು ನಿರ್ಮಾಣ ಮಾಡಲು ಸುಮಾರು 1 ಲಕ್ಷ ಖರ್ಚಾದಲ್ಲಿ ನಿಮಗೆ ರಾಜ್ಯ ಸರ್ಕಾರದಿಂದ ಅದರ ಅರ್ಧದಷ್ಟು ಅಂದರೆ 50,000ಗಳ ಸಬ್ಸಿಡಿ ಸೌಲಭ್ಯ ಸಿಗುತ್ತದೆ. ಉಳಿದ 50,000 ರೂಪಾಯಿಗೆ ಗೆ ರಾಜ್ಯ ಸರ್ಕಾರವು 4% ನಷ್ಟು ಬಡ್ಡಿ ದರದಲ್ಲಿ ನಿಮಗೆ ಸಾಲ ಸೌಲಭ್ಯ ನೀಡುತ್ತದೆ.
2. ಮೈಕ್ರೋ ಕ್ರೆಡಿಟ್ ಸಬ್ಸಿಡಿ ಸಾಲ ಸೌಲಭ್ಯ ಯೋಜನೆ:
ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನೀವೇನಾದರೂ ಬಯಸಿದರೆ ಹಾಗೂ ಘಟಕ ನಿರ್ಮಾಣ ಮಾಡಲು ಬಯಸಿದ್ದಲ್ಲಿ ಆ ಘಟಕದ ವೆಚ್ಚ ₹2,50,000 ಗಳಾಗಿದ್ದರೆ ನಿಮಗೆ ಇದರಲ್ಲಿ ಸಹಾಯಧನವಾಗಿ ರೂ.1,50,000 ರೂಪಾಯಿಗಳು ಸಿಗುತ್ತದೆ. ಇನ್ನುಳಿದಿರುವ 1 ಲಕ್ಷ ರೂಪಾಯಿಗೆ ರಾಜ್ಯ ಸರ್ಕಾರವು 4% ಬಡ್ಡಿ ಎಷ್ಟು ದರದಲ್ಲಿ ಸಾಲ ನೀಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು:
- ಅರ್ಜಿ ಸಲ್ಲಿಸಲು ಬಯಸಿದರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಮತ್ತು 60 ವರ್ಷದ ಒಳಗಿನವರಾಗಿರಬೇಕು.
- ಅರ್ಜಿ ಸಲ್ಲಿಸುವವರು ಪರಿಶಿಷ್ಟ ಪಂಗಡ (SC) ವರ್ಗಕ್ಕೆ ಸೇರಿದವರಾಗಿರಬೇಕು.
- ಆರ್ಥಿಕವಾಗಿ ಹಿಂದುಳಿದಿರುವವರು ಮಾತ್ರ ಈ ಒಂದು ಸಬ್ಸಿಡಿ ಸಾಲ ಸೌಲಭ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
- ಆಧಾರ್ ಕಾರ್ಡ್
- ಸ್ವಯಂ ಉದ್ಯೋಗ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಸಬ್ಸಿಡಿ ಸಾಲ ಸೌಲಭ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಮೊದಲನೇದಾಗಿ ನೀವು ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ನೀಡಿ ಅಲ್ಲಿ ನೀವು ನಿಮ್ಮ ಅರ್ಜಿಯನ್ನು ಸುಲಭವಾಗಿ ಸಲ್ಲಿಕೆ ಮಾಡಬಹುದು.