ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್! ಅಕ್ಕಿ ಹಣ ಎಲ್ಲರ ಬ್ಯಾಂಕ್ ಖಾತೆಗಳಿಗೆ ಜಮಾ! Anna Bhagya Amount Credited
Anna Bhagya Amount Credited: ತಮಗೆಲ್ಲರಿಗೂ ಈ ಒಂದು ಹೊಸ ಲೇಖನಕ್ಕೆ ಸ್ವಾಗತ, ಸ್ನೇಹಿತರೆ ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಲಿದ್ದೇವೆ. ಸ್ನೇಹಿತರೆ ನನ್ನ ಭಾಗ್ಯ ಯೋಜನೆ ಯನ್ನು ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿ ಜಾರಿಗೊಳಿಸಿದೆ. ಇದುವರೆಗೆ ರಾಜ್ಯ ಸರ್ಕಾರವು ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಿದೆ. ಆದರೆ ಕಳೆದ ಮೂರು ತಿಂಗಳಿಂದ ಅನ್ನಭಾಗ್ಯ ಯೋಜನೆ ಅಕ್ಕಿ ಹಣವನ್ನು ರಾಜ್ಯ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿಲ್ಲ. ಆದರೆ ಈಗ ಆಹಾರ ಸಚಿವರು ಕೆಎಚ್ ಮುನಿಯಪ್ಪನವರು ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಅದೇನೆಂದು ತಿಳಿಯಲು ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್! ಅಕ್ಕಿ ಹಣ ಜಮಾ!
ಸ್ನೇಹಿತರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಮೂರು ತಿಂಗಳಿನಿಂದ ಅನ್ನ ಭಾಗ್ಯ ಯೋಜನೆ, ಪೆಂಡಿಂಗ್ ಹಣವನ್ನು ರಾಜ್ಯ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ಆಕ್ರೋಶವನ್ನು ಹೊರಹಾಕಿದ್ದಾರೆ. ಆದರೆ ಈಗ ಆಹಾರ ಸಚಿವರಾದ ಕೆಎಚ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆಯ ಬಗ್ಗೆ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ, ಅದುವೇ ನನ್ನ ಭಾಗ್ಯ ಯೋಜನೆ ಪೆಂಡಿಂಗ್ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳು ಯಾರು ಕೂಡ ಚಿಂತೆ ಕೊಡಬೇಕಾಗಿಲ್ಲ ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣವು ಜಮೆ ಆಗಲಿದೆ. ಹಾಗೆ ನೀವು ನಿಮ್ಮ ನಿಮ್ ಬ್ಯಾಂಕ್ ಖಾತೆಯನ್ನು ಪರಿಶೀಲಿಸುತ್ತಾ ಇರುವುದು ಉತ್ತಮ ಏಕೆಂದರೆ ಈ ರೀತಿ ಸರ್ಕಾರದಿಂದ ಯಾವುದೇ ಯೋಜನೆಯ ಹಣವು ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅಂದರೆ ಹಂತ ಹಂತವಾಗಿ ಹಣವು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಆಗುತ್ತದೆ.
ಅನ್ನಭಾಗ್ಯ ಯೋಜನೆಯ ಡಿ ಬಿ ಡಿ ಸ್ಟೇಟಸ್ ಚೆಕ್ ಹೇಗೆ ಮಾಡುವುದು? Anna Bhagya Scheme DBT Status Check
- ಸ್ನೇಹಿತರೆ, ಮೊದಲನೇದಾಗಿ ನೀವು ಪ್ಲೇ ಸ್ಟೋರ್ ನಿಂದ ಡಿ ಬಿ ಟಿ ಕರ್ನಾಟಕ (DBT Karnataka) ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ನಂತರ (DBT Karnataka) ಅಪ್ಲಿಕೇಶನ್ ಅನ್ನು ತೆರೆದು ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ಈಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ.
- ಈಗ ಓಟಿಪಿಯನ್ನು ಅಲ್ಲಿ ಕೇಳಿದಾದ ಬಾಕ್ಸ್ ನಲ್ಲಿ ನಮೂದಿಸಿದ ನಂತರ ಓಕೆ ಬಟನ್ ಅನ್ನು ಕ್ಲಿಕ್ ಮಾಡಿ.
- ನಂತರ ನಾಲ್ಕು ಸಂಕೆಯ ಎಂಪಿನ್ mPIN ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಕ್ರಿಯೇಟ್ ಮಾಡಿದ ನಾಲ್ಕು ಸಂಖ್ಯೆಯ mPIN ಅನ್ನು ನೀವು ಪ್ರತಿ ಬಾರಿ ಲಾಗಿನ್ ಆಗುವ ವೇಳೆ ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ.
- ಈಗ ನೀವು ರಚಿಸಿಕೊಂಡ (mPIN) ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ. ಲಾಗಿನ್ ಆದ ನಂತರ ನಿಮ್ಮ ಮುಂದೆ ಫಲಾನುಭವಿಗಳ ಎಲ್ಲಾ ವಿವರಗಳು ಕಾಣುತ್ತವೆ.
- ಅಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ಈಗ ಅಲ್ಲಿ ಅನ್ನಭಾಗ್ಯ ಯೋಜನೆಯ ಆಯ್ಕೆಯನ್ನು ಕ್ಲಿಕ್ ಮಾಡಿ.
ಹೀಗೆ ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ಅನ್ನ ಭಾಗ್ಯ ಯೋಜನೆ, ಹಣ ಜಮೆಯಾದ ತಾರಿಕ್ ಹಾಗೂ ಇನ್ನಿತರ ಎಲ್ಲ ವಿವರಗಳು ಕಾಣುತ್ತವೆ. ಈ ರೀತಿಯಾಗಿ ಎಲ್ಲರೂ ಸಹ ಸುಲಭವಾಗಿ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು..