BSNL Best Plan: BSNL ಗ್ರಾಹಕರಿಗೆ ಗುಡ್ ನ್ಯೂಸ್! ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ 365 ದಿನಗಳ ರಿಚಾರ್ಜ್ ಪ್ಲಾನ್!

BSNL Best Plan: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ಇಂದು ನಾವು ತಿಳಿಸಲು ಬಯಸುವ ವಿಷಯವೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರಗಳನ್ನು ಏರಿಕೆ ಮಾಡಿಕೊಂಡಿವೆ. ಇದರ ಬೆನ್ನಲ್ಲೇ ಬಿಎಸ್ಎನ್ಎಲ್ ಸಿಂ ಬಳಸುತ್ತಿರುವ ಗ್ರಾಹಕರು ತುಂಬಾ ಸಂತಸದಲ್ಲಿದ್ದಾರೆ, ಏಕೆಂದರೆ ಬಿಎಸ್ಎನ್ಎಲ್ ಕಂಪನಿ ಮಾತ್ರ ಅತಿ ಕಡಿಮೆ ಬೆಲೆಯಲ್ಲಿ ಅಧಿಕ ಲಾಭ ವುಳ್ಳ ರಿಚಾರ್ಜ್ ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ ಹೀಗಾಗಿ ಅವರು ಖುಷಿಯಾಗಿದ್ದಾರೆ. ಇದೇ ರೀತಿ ಇಂದು ಕೂಡ ಒಂದು ಹೊಸ ರಿಚಾರ್ಜ್ ಯೋಜನೆಯ ಬಗ್ಗೆ ನಿಮಗೆ ತಿಳಿಸಿದ್ದೇವೆ.

ಸ್ನೇಹಿತರೆ ಹಲವು ಟೆಲಿಕಾಂ ಕಂಪನಿಗಳ ಗ್ರಾಹಕರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತಿದ್ದಾರೆ ಇದಕ್ಕೆ ಕಾರಣ ಬೇರೆ ಕಂಪನಿಗಳ ರಿಚಾರ್ಜ್ ಯೋಜನೆಗಳಲ್ಲಿ ಆಗಿರುವ ಏರಿಕೆ. ಸ್ನೇಹಿತರೆ ಇಂದು ಒಂದು ಅತಿ ಕಡಿಮೆ ಬೆಲೆಯುಳ್ಳ ಮತ್ತು ವರ್ಷವಿಡಿ ವ್ಯಾಲಿಡಿಟಿ ಉಳ್ಳ ಅಂದರೆ 365 ದಿನಗಳ ಮಾನ್ಯತೆಯುಳ್ಳ ಹೊಸ ಪ್ಲಾನ್ ಬಗ್ಗೆ ನಿಮ್ಮೆಲ್ಲರಿಗೆ ತಿಳಿಸಲಿದ್ದೇವೆ ಈ ಲೇಖನವನ್ನು ತಪ್ಪದೆ ಕೊನೆವರೆಗೂ ಓದಿರಿ.

₹1,198 ರೂಪಾಯಿಯ ಹೊಸ ರಿಚಾರ್ಜ್ ಪ್ಲಾನ್:

ಸ್ನೇಹಿತರೆ ನೀವೇನಾದರೂ ಈ ಒಂದು ಬಿಎಸ್ಎನ್ಎಲ್ ನ ಹೊಸ ರಿಚಾರ್ಜ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ ನಿಮಗೆ ಸುಮಾರು 365 ದಿನಗಳ ಮಾನ್ಯತೆಯೊಂದಿಗೆ ಈ ಒಂದು ರಿಚಾರ್ಜ್ ಪ್ಲಾನ್ ಬರೆಯಲಿದೆ. ಮತ್ತು ನೀವು ಸುಮಾರು 36GB ಡಾಟಾವನ್ನು ಸಹ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಈ ಒಂದು ₹1,198 ರೂಪಾಯಿಯ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಒಂದು ವರ್ಷದವರೆಗೆ ಸುಧೀರ್ಘ ವ್ಯಾಲಿಡಿಟಿಯನ್ನು ಪಡೆಯುವುದರ ಮುಖಾಂತರ 36GB ಜಿಬಿ ಹೈ ಸ್ಪೀಡ್ ಡಾಟಾವನ್ನು ಸಹ ಆನಂದಿಸಬಹುದು. ಮತ್ತು ನೀವು ಈ ಒಂದು ಯೋಜನೆಯಲ್ಲಿ 300 ನಿಮಿಷಗಳ ಕರೆಗಳನ್ನು ಒಂದು ತಿಂಗಳಲ್ಲಿ ಮಾಡಬಹುದಾಗಿರುತ್ತದೆ. ಮತ್ತು ಈ ಒಂದು ಪ್ಲಾನ್ ನಲ್ಲಿ ನೀವು ತಿಂಗಳಿಗೆ 30 SMS ಗಳನ್ನು ಕಳಿಸಬಹುದಾಗಿರುತ್ತದೆ.

ನಿಮ್ಮ ಸಿಮ್ ಕಾರ್ಡ್ ಅನ್ನು ವರ್ಷವಿಡಿ ಸಕ್ರಿಯವಾಗಿ ಇರಿಸಿಕೊಳ್ಳಲು ಮತ್ತು ನೀವೇನಾದರೂ ಹೆಚ್ಚಿನದಾಗಿ ಡಾಟಾವನ್ನು ಬಳಸುವುದಿಲ್ಲ ಎಂದಾದಲ್ಲಿ ಹಾಗೂ ನೀವು ಹೆಚ್ಚಾಗಿ ಮೊಬೈಲ್ ಬಳಸುವುದಿಲ್ಲ ಮತ್ತು ಮೊಬೈಲ್ ನಲ್ಲಿ ಹೆಚ್ಚಾಗಿ ಮಾತನಾಡುವುದಿಲ್ಲ ಎಂದಾದಲ್ಲಿ ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದಾಗಿದೆ.

ನೀವು ಬಿಎಸ್ಎನ್ಎಲ್ ನ ಸಿಮ್ ಖರೀದಿಸುವ ಮೊದಲು ನಿಮ್ಮ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಹೇಗಿದೆ ಎಂದು ಪರಿಶೀಲಿಸಿ ನಂತರದಲ್ಲಿ ನೀವು ಸಿಮ್ ಅನ್ನು ಖರೀದಿಸುವುದು ಉತ್ತಮ ಎಂದು ಹೇಳಬಹುದು ಏಕೆಂದರೆ ಕೆಲವು ಬಾರಿ ಸರಿಯಾಗಿ ನೆಟ್ವರ್ಕ್ ಸಿಗದೇ ಇರಬಹುದು ಹಾಗಾಗಿ ಮೊದಲು ನಿಮ್ಮ ಪ್ರದೇಶದಲ್ಲಿ ನೆಟ್ವರ್ಕ್ ಪರಿಶೀಲಿಸಿ, ನಂತರ ಸಿಮ್ ತೆಗೆದುಕೊಂಡು ರಿಚಾರ್ಜ್ ಮಾಡಿಕೊಳ್ಳುವುದು ಉತ್ತಮ.

ನಾನು Kiran ಕಳೆದ 3 ವರ್ಷಗಳಿಂದ ಕಂಟೆಂಟ್ ರೈಟಿಂಗ್ ಮಾಡುತ್ತಿದ್ದೇನೆ. ಮಾಧ್ಯಮ ಮತ್ತು ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಾನು ಪ್ರತಿಯೊಂದು ಸುದ್ದಿಗಳ ಮೇಲೆ ನಿಗಾ ಇಡುತ್ತೇನೆ. ಈಗ ನಾನು ನನ್ನ ಅನುಭವವನ್ನು kannadanidhi.com ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. Contact Us - help.kannadanidhi@gmail.com

Leave a Comment