Post Office Vacancy 2024: ಪೋಸ್ಟ್ ಆಫೀಸ್ ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು!
Post Office Vacancy 2024: ತಮಗೆಲ್ಲರಿಗೂ ನಮಸ್ಕಾರ ಸ್ನೇಹಿತರೆ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವಂತಹ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಂದ ಪೋಸ್ಟ್ ಆಫೀಸ್ಇಲಾಖೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಒಂದು ಪೋಸ್ಟ್ ಆಫೀಸ್ನ ಹುದ್ದೆಗಳಿಗೆ ಯಾವೆಲ್ಲ ಅರ್ಹತೆಗಳು ಬೇಕು? ಮತ್ತು ಅರ್ಜಿ ಪ್ರಕ್ರಿಯೆ ಹೇಗೆ? ಹಾಗೂ ಸಂಬಳ ಎಷ್ಟು? ಮತ್ತು ಅರ್ಜಿ ಶುಲ್ಕ ಹಾಗೂ ಇತರ ಎಲ್ಲಾ ವಿವರಗಳ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ತಪ್ಪದೇ ಓದಿರಿ.
Table of Contents
Post Office Vacancy 2024: ಈ ಹುದ್ದೆಗಳ ಸಂಪೂರ್ಣ ವಿವರ:
ಇಲಾಖೆಯ ಹೆಸರು | ಭಾರತೀಯ ಅಂಚೆ ಇಲಾಖೆ |
ಹುದ್ದೆಯ ಹೆಸರು | ಸಹಾಯಕ ಇಂಜಿನಿಯರ್ (ಸಿವಿಲ್) |
ಒಟ್ಟು ಹುದ್ದೆಗಳ ಸಂಖ್ಯೆ | 7 ಹುದ್ದೆಗಳು |
ಅರ್ಜಿ ಪ್ರಕ್ರಿಯೆ | ಆನ್ಲೈನ್ |
ಉದ್ಯೋಗದ ಸ್ಥಳ | ಭಾರತಾದ್ಯಂತ |
ವಿದ್ಯಾರ್ಹತೆ:
ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವಂತಹ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಯಾವುದಾದರೂ ವಿಶ್ವವಿದ್ಯಾನಿಲಯದಿಂದ ಸಿವಿಲ್ ಇಂಜಿನಿಯರಿಂಗ್ (Civil Engineering) ಪದವಿಯನ್ನು ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ ವಿವರ:
ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವಂತಹ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 56 ವರ್ಷದ ಒಳಗಿನವರ ಆಗಿರಬೇಕು ಇಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕದ ವಿವರ:
ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆಯ ಪ್ರಕ್ರಿಯೆ:
ಸ್ನೇಹಿತರೆ ಈ ಒಂದು ಪೋಸ್ಟ್ ಆಫೀಸ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ನೋಡುವುದಾದರೆ ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಿ ನಂತರ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ನಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳದ ವಿವರ:
ಈ ಹುದ್ದೆಗಳಿಗೆ ಸಂಬಳದ ಬಗ್ಗೆ ನೋಡುವುದಾದರೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹುದ್ದೆಗಳಿಗೆ ಹಾಗೆ ಆದ ಅಭ್ಯರ್ಥಿಗಳಿಗೆ ₹44, 900 ರೂಪಾಯಿಯಿಂದ ₹1,42,400 ರೂಪಾಯಿಗಳನ್ನು ನೀಡಲಾಗುವುದು ಎಂದು ಅಧಿಕೃತವಾಗಿ ಇಳಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20/ಸೆಪ್ಟೆಂಬರ್/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/ನವೆಂಬರ್/2024
ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಾವು ಕೆಳಗಡೆ ನೀಡಿರುವ ಲಿಂಕ್ ಅನ್ನು ಅನುಸರಿಸುವ ಮೂಲಕ ಪೋಸ್ಟ್ ಆಫೀಸ್ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಹುದ್ದೆಗಳ ಆಯ್ಕೆಯನ್ನು ಒತ್ತುವ ಮೂಲಕ ನಂತರ ಅಲ್ಲಿಂದ ನೀವು ಈ ಹುದ್ದೆಗಳ ಲಿಂಕನ್ನು ಸೆಲೆಕ್ಟ್ ಮಾಡಿಕೊಂಡು ಈ ಹುದ್ದೆಗಳಿಗೆ ತಮ್ಮ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಪಟ್ಟ ಎಲ್ಲಾ ಲಿಂಕ್ ಗಳನ್ನು ಕೆಳಗಡೆ ನೀಡಲಾಗಿದೆ.
ನೋಟಿಫಿಕೇಶನ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |