Muskaan Scholarship 2024: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ, ನಮ್ಮ ದೇಶದಲ್ಲಿ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಅಂತಹ ಎಲ್ಲಾ ವಿದ್ಯಾರ್ಥಿಗಳಿಗೆಲ್ಲರಿಗೂ ಸಹ ಕೇಂದ್ರ ಸರ್ಕಾರದ ವತಿಯಿಂದ ಹಾಗೂ ಇನ್ನಿತರ ಎಲ್ಲಾ ಪ್ರೈವೇಟ್ ಸಂಸ್ಥೆಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅವರಿಗೆ ಉತ್ತೇಜನ ನೀಡಲು ಹಾಗೂ ಪ್ರೋತ್ಸಾಹ ಧನ ನೀಡಲು ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಆರ್ಥಿಕ ನೆರವು ನೀಡಿ ಅವರ ವಿದ್ಯಾಭ್ಯಾಸ ಪೂರ್ಣಗೊಳಿಸಲು ಶ್ರಮಿಸುತ್ತಿವೆ. ಇದೇ ರೀತಿ ಮುಸ್ಕಾನ್ ಸ್ಕಾಲರ್ಷಿಪ್ ಯೋಜನೆ 2024 ಅನ್ನು ಸಹ ವಾಲ್ವೊಲಿನ್ ಕಮ್ಮಿನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಈ ಸ್ಕಾಲರ್ಶಿಪ್ ಯೋಜನೆಯನ್ನು ನಡೆಸುತ್ತಿದೆ. ಈ ಸ್ಕಾಲರ್ಶಿಪ್ ಯೋಜನೆ ಬಗ್ಗೆ ಸಂಪೂರ್ಣ ವಿವರಣೆ ಕೆಳಗಡೆ ನೀಡಲಾಗಿದೆ.
ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆ 2024:
ವಾಲ್ವೊಲಿನ್ ಪ್ರೈವೇಟ್ ಸಂಸ್ಥೆಯು ನಡೆಸುತ್ತಿರುವ ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆಯನ್ನು ಡ್ರೈವರ್ ಗಳ ಮಕ್ಕಳಿಗೆ ಹಾಗೂ ಮೆಕ್ಯಾನಿಕ್ ಗಳ ಮಕ್ಕಳಿಗೆ ಹಣಕಾಸಿನ ಹಾಗೂ ಆತನವನ್ನು ನೀಡಿ ಅಭಿವೃದ್ಧಿಪಡಿಸಲು ಪ್ರೈವೇಟ್ ಸಂಸ್ಥೆ ಒಂದರಿಂದ ಈ ವಿದ್ಯಾರ್ಥಿ ವೇತನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ಸ್ಕಾಲರ್ಶಿಪ್ ಯೋಜನೆಯಲ್ಲಿ ಬಡಮಕ್ಕಳ ಆರ್ಥಿಕ ಅಭಿವೃದ್ಧಿಗಾಗಿ ಸುಮಾರು ₹12,000 ರೂಗಳನ್ನು ವಿದ್ಯಾರ್ಥಿ ವೇತನದ ಮುಖಾಂತರ ನೀಡಲಾಗುತ್ತಿದೆ. ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 9ನೇ ತರಗತಿ ಹಾಗೂ 12ನೇ ತರಗತಿಯ ಒಳಗೆ ಓದುತ್ತಿರಬೇಕು ಇಂತಹ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿವೇತನಕ್ಕೆ ಬೇಕಾಗುವ ಅರ್ಹತೆಗಳು:
- ಭಾರತದ ಉತ್ತರ, ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 9ನೇ ತರಗತಿಯಿಂದ 12ನೇ ತರಗತಿಯೊಳಗೆ ಓದುತ್ತಿರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ ಶೇಕಡ 60% ಅಂಕಗಳನ್ನು ಗಳಿಸಿರಬೇಕು.
- ಮೆಕ್ಯಾನಿಕ್ ಗಳ ಮತ್ತು ಚಾಲಕರ ಮಕ್ಕಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವಾರ್ಷಿಕ ಆದಾಯವು 8 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಹಿಂದಿನ ವರ್ಷದ ಅಂಕ ಪಟ್ಟಿ
- ಚಾಲನ ಪರವಾನಗಿ ಪ್ರಮಾಣ ಪತ್ರ
- ಬ್ಯಾಂಕ್ ಸ್ಟೇಟ್ ಮೆಂಟ್
- ಇಮೇಲ್ ಐಡಿ
- ಪಾಸ್ಪೋರ್ಟ್ ಗಾತದ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಮುಸ್ಕಾನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವೇನಾದರೂ ಬಯಸಿದರೆ. ಕೆಳಗೆ ನೀಡಿರುವ ಲಿಂಕನ್ನು ಅನುಸರಿಸಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿಯನ್ನು ಸಲ್ಲಿಸಿ, 12,000 ಉಚಿತ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ನೀಡಿರುವ ಲಿಂಕ್ ಅನ್ನು ಅನುಸರಿಸಿ ನೀವು ಸುಲಭವಾಗಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.