Anna Bhagya Update: ಎಲ್ಲಾ ಕನ್ನಡ ಜನತೆಗೆ ನಮಸ್ಕಾರ, ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಬಯಸುವ ವಿಷಯ ಏನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಫಲಾನುಭಿಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ನಮ್ಮ ರಾಜ್ಯದ ಜನತೆಗೆ ವಿತರಣೆ ಮಾಡಲಾಗುತ್ತಿದೆ, ಹಾಗೂ ಇನ್ನುಳಿದ 5 ಕೆಜಿ ಅಕ್ಕಿಗೆ ನಗದು ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ಪಡಿತರ (ತಿಂಗಳ ರೇಷನ್) ಅನ್ನು ವಿತರಿಸಲು ಮುಂದಾಗಿದ್ದರೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿರಿ ಇದರಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
Anna Bhagya Update: ಇನ್ನುಮುಂದೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆಯಾಗಲಿದೆ:
10 ಕೆ.ಜಿ ಅಕ್ಕಿಯನ್ನು ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಯ ಅಕ್ಕಿಯ ಹಣವನ್ನು ಎಲ್ಲಾ ಫಲಾನುಭವಿಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಮುಂಚೆ ನಮಗೆ ಅಡುಗೆ ಎಣ್ಣೆ, ಕಾಳು, ಸಕ್ಕರೆ, ಉಪ್ಪು ಮುಂತಾದವುಗಳು ಸಿಗುತ್ತಿದ್ದವು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಈಗ ಆಹಾರ ಸಚಿವಾಲಯವು ಈ ಧಾನ್ಯಗಳನ್ನು ಮರುಹಂಚಿಕೆ ಮಾಡಲು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಈ ಧಾನ್ಯಗಳ ವಿತರಣೆಯನ್ನು ಅಕ್ಟೋಬರ್ 1 ರಿಂದ ನಡೆಸಲು ನಿರ್ಧರಿಸಲಾಗಿದೆ.
Anna Bhagya Update: ಅನ್ನಭಾಗ್ಯ ಯೋಜನೆಯ ಬಗ್ಗೆ ಸಚಿವರ ಸ್ಪಷ್ಟಣೆ:
ಕೇಂದ್ರ ಸರಕಾರ ನೀಡುವ 5 ಕೆಜಿ ಅಕ್ಕಿ ಜತೆಗೆ ರಾಜ್ಯ ಸರಕಾರವೂ 5 ಕೆಜಿ ಅಕ್ಕಿ ಬದಲು ₹34ರಂತೆ ಪ್ರತಿ 5 ಕೆಜಿ ಅಕ್ಕಿಗೆ ₹170 ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಒಪ್ಪಿದಂತೆ ಪ್ರತಿ ಕೆಜಿ ಅಕ್ಕಿಗೆ ₹ 34ರಂತೆ ಅಕ್ಕಿ ನೀಡಲಿದೆ, ರಾಜ್ಯ ಸರ್ಕಾರ 5 ಕೆಜಿ ಅಕ್ಕಿಗೆ ಖಾತರಿ ನೀಡಲಿದೆ ಮತ್ತು ಅಕ್ಟೋಬರ್ 1 ರಿಂದ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮೂಲಕ ಪಡೆಯಬೇಕು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಡುಗೆ ಎಣ್ಣೆ, ಸಕ್ಕರೆ, ಖಾರ ಇತ್ಯಾದಿ ದಿನನಿತ್ಯ ಬಳಸುವ ವಸ್ತುಗಳನ್ನು ವಿತರಿಸಲಾಗುತ್ತದೆ. ಅಕ್ಟೋಬರ್ 1 ರಿಂದ ಜನತೆಗೆ ಪಡಿತರ ರೂಪದಲ್ಲಿ ವಿತರಿಸಲಾಗುವುದು. ಅನ್ನಭಾಗ್ಯ ಯೋಜನೆಯ ಎಲ್ಲಾ ಲಾಭರ್ತಿಗಳಿಗೆ ಇದೊಂದು ಸಂತಸದ ಸುದ್ದಿ ಎಂದೇ ಹೇಳಬಹುದು.